ishtena!
ಏನಿದು ಇಷ್ಟೇನಾ !...?
ನಿಮ್ಮನ್ನು ಯಶಸ್ಸು ಹಾಗೂ ಸಂತೋಷದ ಜೀವನದ ಕಡೆಗೆ ಕರೆದೊಯ್ಯುವ ವಿಶಿಷ್ಟ ಅನುಭವವೇ ಇಷ್ಟೇನಾ !..
ಈಗ ನಡೆಸುತ್ತಿರುವ ಜೀವನಕ್ಕಿಂತ ಇನ್ನೂ ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆನ್ನುವವರಿಗೆ ಮತ್ತು ನಿಮ್ಮ ಜೀವನವನ್ನು ಸಾಧನೆಯ ಕಡೆ ತೆಗೆದುಕೊಂಡು ಹೋಗಬಯಿಸುವವರಿಗೆ ಈ ಬುಕ್ ನಿಮ್ಮೊಂದಿಗೆ ಕೈಜೋಡಿಸಿ ನಿಮ್ಮನ್ನು ಯಶಸ್ಸು ಹಾಗೂ ಸಂತೋಷದ ಕಡೆಗೆ ಕರೆದುಕೊಂಡು ಹೋಗುವ ಅತ್ಯುತ್ತಮ ಗೆಳೆಯನಾಗಬಲ್ಲದು.
ಆಡು ಭಾಷೆಯಲ್ಲಿಯೇ ಹೇಳುತ್ತಾ ತುಂಬಾ ಸರಳವಾಗಿ ಎಂಥವರಿಗೂ ಅರ್ಥ ಮಾಡಿಸುವ ಶೈಲಿಯೇ ಈ “ಇಷ್ಟೇನಾ!” ಬುಕ್ ನ ವಿಶೇಷತೆ.
ದಿನಬಳಕೆಯ ಮಾತುಗಳನ್ನೇ ಟೈಟಲ್ಸ್ ಗಳನ್ನಾಗಿ ಬಳಸಿಕೊಂಡು, ಅದರಲ್ಲಿಯೇ ಪಾಸಿಟಿವ್ ಅಂಶಗಳನ್ನು ಚರ್ಚಿಸಿ, ನಿಮ್ಮನ್ನು ಎಚ್ಚರಿಸುತ್ತಾ ಓದಿದ ಮೊದಲ ದಿನದಿಂದಲೇ ಜೀವನದ ಇನ್ನೊಂದು ಹೊಸ ಅಧ್ಯಾಯಕ್ಕೆ ಕರೆದುಕೊಂಡು ಹೋಗುತ್ತದೆ.
ನಾನು ಏನು ಮಾಡಬೇಕು? ಏನು ಮಾಡಿದರೆ ಸರಿ? ನಾನು ಏಕೆ ಇನ್ನೂ ಸಕ್ಸಸ್ ಆಗಿಲ್ಲ?… ಹೀಗೆ ಜೀವನದಲ್ಲಿ ಬರುವ ಅನೇಕ ಪ್ರಶ್ನೆಗಳಿಗೆ ಹಾಗೂ ಗೊಂದಲಗಳಿಗೆ ಉತ್ತರವನ್ನು ತುಂಬಾ ಸರಳವಾಗಿ ವಿವರಿಸಿ ಮುಂದಿನ ದಾರಿಗಳನ್ನು ಈ ಬುಕ್ ತೋರಿಸುತ್ತದೆ. ಅಷ್ಟಕ್ಕೇ ಸುಮ್ಮನಾಗದೆ, ನಿಮ್ಮನ್ನು ಕಾರ್ಯೋನ್ಮುಖರಾಗುವಂತೆ ಮಾಡಿ ಎಲ್ಲ ಓದುಗರಿಗೆ ಸಕ್ಸಸ್ ಸಿಗುವಂತೆ ಮಾಡುವ ಪ್ರಯತ್ನವನ್ನು “ಇಷ್ಟೇನಾ”! ಮಾಡುತ್ತದೆ.
ಏಕೆ ಈ ಬುಕ್ ಅನ್ನು ಓದಬೇಕು?
ಎಷ್ಟೋ ವರ್ಷಗಳನ್ನು ಏಕೆ? ಹೇಗೆ?ಯಾವಾಗ?… ಹೀಗೆ ಯಾವುದೇ ಪ್ರಶ್ನೆಗಳನ್ನು ನಮಗೆ ನಾವೇ ಹೇಳಿದರೆಂದು, ಯಾರೋ ಹೇಳಿದರಂದು, ಯಾರೋ ಏನೋ ಮಾಡಿದರೆಂದು, ನಾವೂ ಕೂಡ ಅವರಿವರಂತೆಯೇ ನಮ್ಮ ಜೀವನವನ್ನೂ ಕಳೆಯುತ್ತಿರುತ್ತೇವೆ. ಏಕೆ? ಎನ್ನುವ ಪ್ರಶ್ನೆಗಳನ್ನು ಕೇಳಲು ಹಾಗೂ ನಮ್ಮಷ್ಟಕ್ಕೆ ನಾವೇ ಕೇಳಿಕೊಳ್ಳಲು ಶುರು ಮಾಡಿದರೆ, ಅಂದಿನಿಂದಲೇ ನಾವು ಮಾಡುವ ಎಲ್ಲಾ ಕೆಲಸಗಳಿಗೂ ಒಂದು ಅರ್ಥ ಸಿಗುತ್ತದೆ. ಮುಂದೆ ಏನು? ಎನ್ನುವ ಪ್ರಶ್ನೆಗಳಿಗೂ ಕ್ಲಾರಿಟಿ ಸಿಗುತ್ತದೆ .
ವ್ಯಕ್ತಿತ್ವ ಬೆಳವಣಿಗೆಗಾಗಿ ಮತ್ತು ಸಂತೋಷದ ಜೀವನಕ್ಕಾಗಿ ಬೇಕಾದ, ಏಕೆ? ಮತ್ತು ಹೇಗೆ? ಎನ್ನುವ ಅನೇಕ ಪ್ರಶ್ನೆಗಳಿಗೆ, ವಿಚಾರಗಳಿಗೆ ತುಂಬಾ ಸರಳವಾಗಿ ಮನಮುಟ್ಟುವಂತೆ ನಮಗೆ ಅರಿವು ಮೂಡಿಸುತ್ತಾ, ಇಷ್ಟೇನಾ! ಬುಕ್ ಓದಿಸಿಕೊಂಡು ಹೋಗುತ್ತದೆ.
ಪ್ರತಿಯೊಬ್ಬರ ಮನಸ್ಸಿನಲ್ಲಿ ಬಂದಿರಬಹುದಾದಂತಹ ಪ್ರಶ್ನೆಗಳಿಗೂ ಉತ್ತರ ಕೊಡುವ ಪ್ರಯತ್ನವನ್ನು ಈ ಬುಕ್ ಮಾಡುತ್ತದೆ.
ಇಷ್ಟೇನಾ! ಓದುವ ನಿಮಗೆ ಯಶಸ್ಸು ಹಾಗೂ ಸಂತೋಷದ ಜೀವನಕ್ಕೆ ಬೇಕಾದ ದಾರಿಯು ತಿಳಿದು, ಹೊಸ ಜೀವನದ ದಾರಿಯಲ್ಲಿ ನೀವು ನಡೆಯಲು ಶುರು ಮಾಡುತ್ತೀರಿ.
ನೀವು ಏನಾದರೂ ಬದಲಾಗಬೇಕೆಂದು ಬಯಸಿದ್ದಲ್ಲಿ ಈ ಬುಕ್ ನಿಮಗೆ ಖಂಡಿತ ಸಹಾಯ ಮಾಡಬಲ್ಲದು.
ಯಾರನ್ನಾದರೂ ಬದಲಾಯಿಸಬೇಕೆಂದು ಅನಿಸಿದರೆ, ಈ ಬುಕ್ ಅನ್ನು ಉಡುಗೊರೆಯ ರೂಪದಲ್ಲಿಯೂ ಕೊಡಬಹುದು.
ಅದೆಲ್ಲ ಸರಿ! ಇದರಿಂದ ನನಗೇನು ಲಾಭ?
ಹೌದು! ಅದು ಹಾಗೆ ಅನಿಸುತ್ತದೆ. ಏನು ಓದಿದರೂ, ಏನು ಕೇಳಿದರೂ, ಯಾರು ಏನು ಹೇಳಿದರೂ, ಇದರಿಂದ ನನಗೇನು ಲಾಭ?…ಎಂಬ ಪ್ರಶ್ನೆಗೆ ಉತ್ತರ ಸಿಗಲಿಲ್ಲವೆಂದರೆ ಯಾವ ಕೆಲಸವನ್ನು ಮಾಡಲು ಉತ್ಸಾಹವೇ ಇರುವುದಿಲ್ಲ.
ಕೆಲವೊಂದು ಸಲ ನಮಗೇನು ಬೇಕೆನ್ನುವುದನ್ನೇ ಮರೆತು ಹೋಗುವಷ್ಟು ನಾವೆಲ್ಲ ಬೇಕಾದ ಅಥವಾ ಬೇಡವಾದ ಕೆಲಸಗಳಲ್ಲಿ ಬ್ಯುಸಿ ಆಗಿಬಿಡುತ್ತೇವೆ. ಎಷ್ಟೋ ವರ್ಷ ಕಳೆದ ಮೇಲೆ, ಅಯ್ಯೋ! ಇಷ್ಟು ವರ್ಷ ಸುಮ್ಮನೆ ಕಾಲ ಕಳೆದೆವಲ್ಲ.. ಎಂದು ಚಿಂತಿಸುತ್ತೇವೆ. ಈಗ ಉಳಿದಿರುವುದು ಎರಡೇ ದಾರಿಗಳು ಒಂದನೇ ದಾರಿ, ಏಕೆ ಹೀಗಾಯ್ತು ಎಂದು ಹಣೆ ಬರಹವನ್ನು ಬೈದುಕೊಳ್ಳುತ್ತಾ.. ಜೀವನವನ್ನು ಕಳೆಯುವುದು. ಎರಡನೇ ದಾರಿ ನಾವು ಬದಲಾಗಲು, ಏನು ಮಾಡಬೇಕೆನ್ನುವುದನ್ನು ಅರ್ಥ ಮಾಡಿಕೊಂಡು, ನಮ್ಮಲ್ಲಿ ಬದಲಾವಣೆಗಳನ್ನು ತಂದುಕೊಂಡು ಯಶಸ್ಸಿನಿಂದ ಕೂಡಿದ ಜೀವನವನ್ನು ಸಂತೋಷದಿಂದ ಕಳೆಯುವುದು. ಬಹುಶಃ ಎರಡನೇ ದಾರಿಯ ಎಲ್ಲರಿಗೂ ಒಳ್ಳೆಯದು.
ಓದುವ ನಿಮಗೆ ಇದು ನನಗೋಸ್ಕರವೇ ಬರೆದ ಬುಕ್ ಎಂದು ಅನಿಸಿದರೂ ಆಶ್ಚರ್ಯವಿಲ್ಲ. ಅಷ್ಟೊಂದು ಸರಳವಾಗಿ, ಬಹಳಷ್ಟು ವಿಷಯಗಳನ್ನು ಚರ್ಚಿಸಿ ಸಲ್ಯೂಷನ್ಸ್ ಗಳನ್ನು ಹಾಗೂ ಸಲಹೆಗಳನ್ನು ಕೊಡಲಾಗಿದೆ.
ಇಷ್ಟೇನಾ ಓದಿದ ಮೇಲೆ, ಎಷ್ಟೋ ವರ್ಷಗಳಿಂದ ಹುಡುಕುತ್ತಿರುವ ಬಹಳಷ್ಟು ಪ್ರಶ್ನೆಗಳಿಗೆ ತುಂಬಾ ಸುಲಭವಾದ ಉತ್ತರ ಸಿಕ್ಕು, ಇಷ್ಟೇನಾ? ನಾನು ಸಂತೋಷದ ಹಾಗೂ ಯಶಸ್ಸಿನ ಜೀವನ ನಡೆಸಲು ಮಾಡಬೇಕಾಗಿರುವುದು.. ಎಂದು ಅನಿಸುವುದು ಖಚಿತ.
ಬೆನ್ನು ತಟ್ಟಿದವರು!
ಡಾ. ಎಚ್.ಎಸ್. ವೆಂಕಟೇಶಮೂರ್ತಿ
ಸಾಮಾನ್ಯವಾಗಿ ನಮ್ಮ ಸುತ್ತಲೂ ತಿರುಗುತ್ತಿರುವ ಸಂಗತಿಗಳು ಕೆಲವಿರುತ್ತವೆ. ಸಕಾರಾತ್ಮಕವಾಗಿ ನೋಡಿದರೆ ಅವು ಲಾಭಪ್ರದ. ನೇತ್ಯಾತ್ಮಕವಾಗಿ ನೋಡಿದೆವೋ ಅದು ಆತ್ಮನಾಶಕ್ಕೆ ದಾರಿ. ಬೇರೆ ಬೇರೆ ಲೇಖನಗಳಲ್ಲಿ ಈ ಸಂಗತಿಗಳನ್ನು ಬಸವರಾಜ್ ಅವರು ‘ಇಷ್ಟೇನಾ ! ‘ದಲ್ಲಿ ಹೃದ್ಯವಾಗಿ ನಿರೂಪಿಸುತ್ತಾರೆ. ಸರಳ, ಸುಂದರ ಹಾಗು ಆಹ್ಲಾದಕರ ಬರವಣಿಗೆ. ಸಂತೋಷ ಮತ್ತು ಮನೋವಿಕಾಸ ಎರಡಕ್ಕೂ ದಾರಿ ಮಾಡಿಕೊಡುವ ಬರವಣಿಗೆ. ಈ ತರುಣ ಮಿತ್ರರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು..
ಪ್ರೊ. ರಾಘವೇಂದ್ರ ಪಾಟೀಲ
ಚೀನಿ ತತ್ವಜ್ಞಾನಿಗಳಾದ ಲಿನ್ ಯುಟಾಂಗ್ ಅವರ ‘ ದಿ ವಿಸ್ಡಮ್ ಆಫ್ ಇಂಡಿಯ‘ ಹಾಗೂ ಕನ್ಫ್ಯೂಷಿಯಸ್ ಅವರ ‘ದಿ ವಿಸ್ಡಮ್ ಆಫ್ ಕನ್ಫ್ಯೂಷಿಯಸ್’ ಇಂತಹ ತತ್ವ ಗ್ರಂಥಗಳನ್ನು ಓದಿದಾಗ ಆದ ಆನಂದವು ‘ಇಷ್ಟೇನಾ!‘ ಓದಿದಾಗ ದೊರಕಿದೆ. ಬಸವರಾಜ್ ಅವರು ಸುಂದರ ಜೀವನವನ್ನು ಕಟ್ಟಿಕೊಳ್ಳುವ 40 ಬಗೆಗಳನ್ನು ನಮ್ಮ ಮುಂದಿಡುತ್ತಾರೆ. ಇಷ್ಟೇನಾ?… ಎಂದು ಓದಿನಲ್ಲಿ ತೊಡಗುವ ನಾವು, ಕೃತಿಯ ಓದಿನ ಕೊನೆ ತಲುಪುವಷ್ಟರಲ್ಲಿ- ಆಹಾ! ಎಷ್ಟೆಲ್ಲಾ ಪಡೆದವಲ್ಲ…! ಎಂದು ಕೃತಾರ್ಥತೆಯಿಂದ ಮಾಗುವಿಕೆಯ ಪಕ್ವತೆಯನ್ನು ತೋರುವುದು ನಿಶ್ಚಿತ!
ಪ್ರೊ. ನರಹರಿ ವಿ.
ನಲವತ್ತು ಅಧ್ಯಾಯಗಳ ‘ಇಷ್ಟೇನಾ!’ ಒಂದು ರೀತಿಯಲ್ಲಿ ವ್ಯಕ್ತಿತ್ವ ವಿಕಸನದಂತಹ ಪುಸ್ತಕಗಳ ಸಾಲಿಗೆ ಸೇರುವಂತಹ ಕೃತಿ. ಆಡು ಭಾಷೆಯಲ್ಲಿ ಹೇಳುತ್ತಾ ಹೋದಂತೆ ಇರುವುದರಿಂದ ಓದಿಸಿಕೊಂಡು ಹೋಗುತ್ತದೆ. ಬಸವರಾಜ್ ಅವರು ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಅಧ್ಯಾಯಗಳ ಹೆಸರುಗಳು ಆಪ್ತವಾಗಿ ಒಪ್ಪುವಂತಿವೆ. ವಿಚಾರಸರಣಿ, ಶೈಲಿಯ ಓಘ, ಸರಳ ಶಬ್ದಗಳ ಬಳಕೆ,ಲಘು ಹಾಸ್ಯ, ಉದಾಹರಣೆಗಳು, ಸಂದರ್ಭಗಳು, ಇತ್ಯಾದಿ ಸಮಯೋಚಿತ ಮತ್ತು ಶ್ಲಾಘನೀಯ. ‘ಇಷ್ಟೇನಾ!’ ಓದುಗರನ್ನು ಸೆಳೆಯಬಲ್ಲದು.
ರಾಧಾಕೃಷ್ಣ ಪಲ್ಲಕ್ಕಿ
ತಮ್ಮ ಅನುಭವದ,ತಾವು ಕಂಡಿರುವ,ಮತ್ತೊಬ್ಬರ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಅನುಭಾವಿಯಾಗಿ ಬದುಕಿನ ಮಗ್ಗುಲುಗಳನ್ನ ಸ್ವತಃ ತಾವೇ ತಿರುಗಿ ನೋಡಿ, ಪರಿಷ್ಕರಿಸಿ ಬರೆದ ಪದಗಳ ಗುಚ್ಚ ‘ಇಷ್ಟೇನಾ!’
ಟ್ಯಾಗ್ ಲೈನ್ ಗಳನ್ನು ಬಳಸಿ ಒಂದೊಂದೇ ಎಪಿಸೋಡ್ ನಲ್ಲಿ ಬರೆದ ಸಣ್ಣ ಸಣ್ಣ ಅನುಭವದ ಅಕ್ಷರಗಳು ಓದುಗರನ್ನು ಎಚ್ಚರಿಸುತ್ತಾ ಹೋಗುತ್ತದೆ. ನಿತ್ಯ ಜೀವನದ ಅರ್ಧಸತ್ಯಗಳ ಪದಗಳ ಗಂಟಿನ ಮೇಲೆ ಕಣ್ಣಾಡಿಸಿದರೆ ಮನುಜನ ಅಂತರ್ಮುಖದ ದರ್ಶನ ಆಗುವುದು ಗ್ಯಾರಂಟಿ. ಹೇಳಬಹುದಾದ,ಹೇಳಲೇಬೇಕೆಂದೆನಿಸುವ ಬರಹಗಾರನ ನುಡಿಗಟ್ಟುಗಳು ಕೆಲವುಸಲ ಸಿಹಿ ಊಟದಂತೆ ರುಚಿಯಾಗಬಲ್ಲದು, ಕೆಲವುಸಲ ಹಾಗಲಕಾಯಿಯಂತೆ ಕಹಿ ಎನಿಸಬಹುದು. ಆದರೆ ಬದುಕಿಗೆ ಇವೆರಡು ಮುಖ್ಯವೆನಿಸಿ ಇಷ್ಟೇನಾ! ನಮ್ಮ ಜೊತೆ ಇರಲೇಬೇಕಾದ ಆಪ್ತ ಗೆಳೆಯನೆನಿಸಿಬಿಡುತ್ತದೆ
